ಅಂಕಲಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಒಂದು ಗ್ರಾಮ.ಚಿಕ್ಕೊಡಿಯಿಂದ 15-18ಕೀಮಿ ಉತ್ತರದಿಕ್ಕಿನಲ್ಲಿದೆ.ಚಿಕ್ಕೊಡಿ-ಮಿರಜ ಮುಖ್ಯ ಹೆದ್ದಾರಿಗೆ ಹೊಂದಿಕೊಂಡು ಬೆಳೆಯುತ್ತಿದೆ. ಕೃಷ್ಣಾ ನದಿ ಗೆ ಹೊಂದಿಕೊಂಡು ಗ್ರಾಮ ಇದಾಗಿದ್ದು ಕಬ್ಬು,ಹತ್ತಿ,ಗೋವಿನ ಜೋಳ ಪ್ರಮುಖ ಬೆಳೆಗಳಾಗಿವೆ.ಈ ಗ್ರಾಮವು ಸಹಕಾರಿ,ರಾಜಕೀಯ, ವೈದ್ಯಕೀಯ ವಾಗಿ, ಧಾರ್ಮಿಕವಾಗಿ ಮುಂದುವರೆದ ಗ್ರಾಮವಾಗಿದ್ದು ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮುಂದುವರೆದು ಪ್ರಜ್ಞಾವಂತರಿಂದ ಕೂಡಿದೆ. ವಿಶೇಷ: ಮಾಜಿ ರಾಜ್ಯಸಭಾ ಸಂಸದರು, ಸಂಸ್ಥೆಯ ಮುಖ್ಯಸ್ಥ ರಾದ "ಪ್ರಭಾಕರ ಕೋರೆ" ರವರ ಹುಟ್ಟುರು ಇದಾಗಿದೆ. ಸಮೀಪದ ಪ್ರಮುಖ ಸ್ಥಳಗಳು: ಪ್ರಸಿದ್ದ "ಯಡೂರು" ವೀರಭದ್ರ ದೇವಾಲಯ == ಜನಸಂಖ್ಯೆ == ೨೦೦೧ ಭಾರತೀಯ ಜನಗಣತಿಯ ಪ್ರಕಾರ ಅಂಕಲಿಯಲ್ಲಿ ೧೧೫೯೩ ಜನರಿದ್ದರು. ಅದರಲ್ಲಿ ೫೯೫೯ ಪುರುಷರು ಮತ್ತು ೫೬೩೪ ಮಹಿಳೆಯರಿದ್ದರು. == ನೋಡಿರಿ == ಬೆಳಗಾವಿ ಕರ್ನಾಟಕದ ಜಿಲ್ಲೆಗಳು == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ://../